Homemade lipbalm using beetroot/ Beetroot lip balm in Kannada
ಕೇವಲ ೨ ವಸ್ತುಗಳಿಂದ ಮಾಡಿ ಬೀಟ್ರೂಟ್ ಲಿಪ್ ಮುಲಾಮ್ - ಬೀಟ್ರೂಟ್ ತುಟಿಯ ಮುಲಾಮ್
ಬೀಟ್ರೂಟ್ನ ನೀವು ಅಡುಗೆ ಮಾಡುವಾಗ ಬಳಸಿರಬಹುದು. ಬೀಟ್ರೂಟ್ ನ ಕತ್ತರಿಸಿದಾಗ ನಿಮ್ಮ ಕೈಯಲ್ಲಿಯೇ ಉಳಿಯುವ ತಿಳಿ-ಕೆಂಪು, ಇದರ ಈ ಲಕ್ಷಣವನ್ನು ನಾವು ನಮ್ಮ ತುಟ್ಟಿಯ ಆರೈಕೆ, ಹಾಗು ಮಗುವಿನ ತುಟ್ಟಿಯ ರೀತಿ ಕೆಂಪಾಗಿಸಬಹುದು. ಈ ಲಿಪ್ ಮುಲಾಮ್ ಕೇವಲ ಎರಡು ಪದಾರ್ಥಗಳಿಂದ ತಯಾರಿಸಬಹುದು .
ಬೀಟ್ರೂಟ್
ಬೀಟ್ರೂಟ್ನಲಿ ನಮ್ಮ ಆರೋಗ್ಯಕ್ಕೆ ಬೇಕಾಗುವ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ ಅವುಗಳೆಂದರೆ ಜೀರ್ಣಕ್ರಿಯೆಯನ್ನು ಸುಧಾರಿಸಿ, ಹೃದಯದ ಆರೋಗ್ಯವನ್ನು ವೃದಿಸುತ್ತದೆ. ಅಲ್ಲದೆ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯಕಾರಿ. ಬೀಟ್ರೂಟ್ನಲ್ಲಿರುವ ವಿಟಮಿನ್ 'ಸಿ ' ನಮ್ಮ ತ್ವಚ್ಛೆಯಾ ಆರೈಕೆಗೆ ಸಹಾಯಕಾರಿ.
ಬೀಟ್ರೂಟ್ ಲಿಪ್ ಮುಲಾಮ್ ಮಾಡಲು ಬೇಕಾಗುವ ವಸ್ತುಗಳೆಂದರೆ :
೧. ಬೀಟ್ರೂಟ್ ದೊಡ್ಡ ಗಾತ್ರದ -೨
೨. ಪೆಟ್ರೋಲಿಯಂ ಜೆಲ್ (ವ್ಯಾಸೆಲಿನ್)
ಲಿಪ್ ಮುಲಾಮ್ ಮಾಡುವ ಕ್ರಮ :
ಮೊದಲಿಗೆ ಬೀಟ್ರೂಟನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆಯನ್ನು ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಿ.
ಕತ್ತರಿಸಿದ ಬೀಟ್ರೂಟ್ ಮಿಕ್ಸರ್ ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಸ್ಟ್ರೈನೆರ್ ನಲ್ಲಿ ಶೋದಿಸಿಕೊಳ್ಳಿ.
ಶೋದಿಸಿಕೊಂಡ ರಸವನ್ನು ಒಂದು ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಇದನ್ನು ೧೫-೨೦ ನಿಮಿಷ ಕುದಿಸಿ ಈ ರಸವು ಗಟ್ಟಿಯಾಗಲು ಆರಂಭವಾಗುತ್ತದೆ. ಈಗ ಉರಿಯನ್ನು ಹರಿಸಿ ರಸವನ್ನು ತಣ್ಣಗಾಗಲು ಬಿಡಿ .
ತಣ್ಣಗದ ರಸಕ್ಕೆ ಅದರ ಸಮನಾದ ಪೆಟ್ರೋಲಿಯಂ ಜೆಲ್ (ವ್ಯಾಸೆಲಿನ್) ಅನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನು ಒಂದು ಬಾಟಲಿಗೆ ಹಾಕಿ ರೆಫ್ರಿಜರೇಟರ್ ನಲ್ಲಿ ೨೦ ನಿಮಿಷಗಳ ಕಾಲ ಹಿಡಿ.
ಇದನ್ನು ನೀವು ದಿನ ೨ ಬಾರಿ ಉಪಯೋಗಿಸಿ. ನಿಮ್ಮ ತುಟ್ಟಿಯ ಆರೈಕೆಮಾಡಿ.
ನಿಮ್ಮಗೆ ಇಷ್ಟವಾಗಿದ್ದಲ್ಲಿ ನಮ್ಮ ಪೇಜ್ ಲೈಕ್ ಮಾಡಿ ಹಾಗು ಶೇರ್ ಮಾಡಿ.
No comments:
Post a Comment